——————————————–
“ಧರ್ಮ” ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ “-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .ಜಿಡ್ಡುಗಟ್ಟಿದ ಮೃತಪ್ರಾಯವಾಗ ಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು 12ನೆ ಶತಮಾನದಲ್ಲಿ ಶರಣರು ಕಲ್ಪಿಸಿದರು.ಧರ್ಮವು ಶೊಷಣೆಯಾದಾಗ ಮೋಸ ಕಪಟ ಕಳ್ಳತನ ಕಂದಾಚಾರ ಮೂಡನಂಬಿಕೆ ತಾಂಡವವಾಡುವಾಗ ಬಸವಣ್ಣನವರು ” ದಯವಿಲ್ಲದ ಧರ್ಮ ಅದೆವುದಯ್ಯಾ “ ಎಂದು ಧರ್ಮಕ್ಕೆ ದಯೆ ಪ್ರೀತಿಯನ್ನು ಅಡಿಪಾಯ ಹಾಕಿದರು.
Religion is a way of life -ಅದು ಬರಿ ಸಿದ್ಧಾಂತವಲ್ಲ ಬದುಕಿನ ಕ್ರಮ ಅಥವಾ ಸಾಧನೆಯ ಹಾದಿ(Religion is a way of life but not view of Life ). ಬದುಕನ್ನ ಕೇವಲ ಅವಲೋಕಿಸಿ ವ್ಯಾಖ್ಯಾನ ಮಾಡುವುದು ಧರ್ಮವಲ್ಲ.ಶರಣರು (LIFE IS NOT ONLY WAY OF LIFE BUT ALSO WAY OF GOOD CONDUCT ) “ಧರ್ಮ ಕೇವಲ ಬದುಕಿನ ಮಾರ್ಗವಲ್ಲ ಆದರೆ ಅದು ಬದುಕಿನ ನೀತಿ ಸಂಹಿತೆ ಸತ್ಯ ಶುದ್ಧ ಆಚರಣೆ “ಎಂದು ಹೇಳಿದರು.ಇಲ್ಲಿ ಸಲ್ಲುವವ ಅಲ್ಲಿ ಸಲ್ಲುವವ ಇಲ್ಲಿ ಸಲ್ಲದವ ಅಲ್ಲಿಯೂ ಸಲ್ಲರಯ್ಯ.ಬಸವಣ್ಣ ನಿರ್ಮಲವಾದ ಮನಸ್ಸಿಗೆ ಮನುಷ್ಯ ತನ್ನನ್ನೇ ಆತ್ಮಾವಲೋಕನ ಮಾಡಿಕೊಳ್ಳಬೇಕು ” ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ ” ಮಾವಿನ ಕಾಯೋಳು ಎಕ್ಕೆ ಕಾಯಿ ನಾನಯ್ಯಾ ” “ಮನವೆಂಬ ಮರ್ಕಟ ” “ವಿಷಯ ವೆಂಬ ಹಸುರೆನ್ನ ಮುಂದೆ ಪಸರಿಸಿದಿರಿ” ಹೀಗೆ ತನು ವಿರೋಧ ಆತ್ಮಾವಲೋಕನ ಜೊತೆಗೆ ಭ್ರತ್ಯಾಚಾರದ ಕಿಂಕರ ಭಾವನೆಯಿಂದಾ ಬಸವಣ್ಣನವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಕ್ತಿ ಚಳುವಳಿ ಮತ್ತು ಸಮತೆಯ ಸಂಘರ್ಷವನ್ನು ಸಾರಿದರು.ಪರಿಣಾಮವಾಗಿ ಕಕ್ಕಯ್ಯ ಚೆನ್ನಯ್ಯ ಹರಳಯ್ಯಾ ಮಾಚಯ್ಯ ಚೆಂದಯ್ಯ,ಸತ್ಯಕ್ಕಾ ಕಾಳವ್ವೆ,,ನಿ೦ಬೆಕ್ಕಾ,,ಅಂಬಿಗರ ಚೌಡಯ್ಯಾ ಹೀಗೆ ಕೆಳಸ್ತರದ ಜನರ ಸಂಘಟನೆಯಿಂದಾ ಲಿಂಗಾಯತ ಎಂಬ ಒಂದು ಹೊಸ ಧರ್ಮವನ್ನು ಬಸವಣ್ಣ ಮತ್ತು ಎಲ್ಲಾ ಶರಣರು ಸ್ಥಾಪಿಸಿದರು ಧರ್ಮ ಗುರು ಸ್ಥಾಪಕ ಬಸವಣ್ಣ.ವಚನಗಳು ಸಮತೆ ಶಾಂತಿ ಪ್ರೀತಿ ವಿಶ್ವ ಬಂಧುತ್ವ ಸಾರುವ ನಿರ್ವಿವಾದ ಸತ್ಯಗಳು . ಆದರೆ ಯಾವುದೇ ಲಾಂಛನ ಕಾವಿ ಮಠವಿರದ ಈ ಧರ್ಮದಲ್ಲಿ ಮತ್ತೆ ಮೌಡ್ಯ ತುಂಬಿಕೊಂಡಿವೆ . ಶರಣರ ಮೂಲ ಆಶಯ ಗುರುತಿಸದೆ ಅದನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ವ್ಯಾಖ್ಯಾನ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.ಶರಣರು ಅನುಭಾವಿಗಳು ಸ್ವಾಮಿಗಳು ,ಮಠಾಧೀಶರು, ಅಕ್ಕ ,ಮಾತೆಯವರು.(MYSTICS PAR EXCELLENCE ).ಕಾಯಕ ದಾಸೋಹ ತತ್ವವನ್ನು ಮೊಟ್ಟ ಮೊದಲ ಬಾರಿಗೆ ತೋರಿ ಬದುಕಿದ ಧೀರರು .ಶರಣರ ಆಧ್ಯಾತ್ಮ ದೃಷ್ಟಿ ಸಂಪದ್ದ್ಭರಿತ ಹಾಗು ಗಟ್ಟಿ ಧ್ವನಿ ಹೊಂದಿದ ಬದುಕಿನ ಪಥ ಸೋಪಾನ. “ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ” ಎಂದೆನ್ನುವ ಶರಣರು ಲಿಂಗ ಯೋಗ (ಪೂಜೆಯಲ್ಲ ) ಮೂಲಕ ಅನುಸಂಧಾನ ಮಾಡಿ ಮನುಷ್ಯ ಹೇಗೆ ತಾನೇ ದೇವನಾಗಬಲ್ಲನು ಎಂದು ಸಾಧಿಸಿ ತೋರಿದ್ದಾರೆ.ಅಲ್ಲಿಯವೆರೆಗಿದ್ದ ಸೋಹಂ ಎಂಬ ಭಾವವು ದಾಸೋಹಂ ಎಂಬ ಮಹಾನ್ ತತ್ವದಲ್ಲಿ ಪರಿವರ್ತನೆಗೊಂಡಿತು . ಇಂತಹ ಕ್ರಾಂತಿ ಜಗತ್ತಿನಲ್ಲಿಯೇ ಅಪರೂಪವಾಗಿದೆ. ವರ್ಗ ವರ್ಣ ಆಶ್ರಮ ಲಿಂಗ ಬೇಧ ಧಿಕ್ಕರಿಸಿದ ಶರಣರು ಸರ್ವಕಾಲಿಕ ಸಮಕಾಲೀನ ಸಮಾನತೆಯ ಸಮಾಜದ ರೂವಾರಿಗಳು.ಅಂದಿನ ಮೌಢ್ಯ ,ಅಂಧ ಶೃದ್ಧೆ ,ಕಂಧಚಾರ ,ಪುನರ್ಜನ್ಮ , ಕರ್ಮ ಸಿದ್ಧಾಂತವನ್ನು ಶರಣರು ಸಂಪೂರ್ಣ ತಿರಸ್ಕರಿಸಿ  ಹೊಸ ಸಮಾಜವನ್ನು ನಿರ್ಮಿಸಿದರು.ಶರಣರು ಪುನರ್ಜನ್ಮ ಕರ್ಮ ಸಿದ್ಧಾಂತ ವಿರೋಧಿಸಿದ ಧೀರರು.—————————————————————–ಅಟ್ಟೆ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾಇಲ್ಲಿ ಅಟ್ಟೆ ಎಂದರೆ ತಲೆಯಿಲ್ಲದ ದೇಹ ಎಂದರ್ಥ .ನಿರ್ಗುಣ ಶೂನ್ಯ ಬಯಲು ಕದಳಿ ಎಂಬ ಪಾರಿಭಾಷಿಕ ಪದಗಳಿವೆ. ಬಸವಣ್ಣವರು ಹುಡುಕಿದ ಸಂಶೋಧಿಸಿದ ಇಷ್ಟಲಿಂಗ ಲಿಂಗವನರಿಯದೆ ಏನನ್ನೂ ಅರಿತರೂ ಫಲವಿಲ್ಲಾ ,ಲಿಂಗವನರಿತ ಬಳಿಕ ಮತ್ತೆನನ್ನೂ ಅರಿತರೂ ಫಲವಿಲ್ಲಾ,ಅದಕ್ಕೆ ಇಂತಹ ಸ್ಥಳ ಮುಟ್ಟಿದ ಬಳಿಕ ಭಕ್ತನಾಗಿ ಮತ್ತೆ ಭವಿಯಾಗಲಿಲ್ಲ.ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ? ಇಂತಹ ಸುಂದರ ಲಿಂಗ ತತ್ವ ತಿಳಿದ ಬಳಿಕ ಮರಳಿ ಹುಟ್ಟಲು ಸಾಧ್ಯವೇ ?ಭವಿ ಒಂದು ಜನ್ಮ ಅದು ಪರಿವರ್ತಿತಗೊಂಡ ಇನ್ನೊಂದು ಸ್ಥಲವೇ” ಭಕ್ತ ” ಇನ್ನೊಂದು ಜನ್ಮ ಇಂತಹ ನಿಜವನರಿದ ಬಳಿಕ ಮರಳಿ ಹುಟ್ಟು ಸಾಧ್ಯವಿಲ್ಲ.ಇದು ಅಲ್ಲಮರ ಅಭಿಮತ .
ಇದೆ ರೀತಿ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯ .ಈ ಕೆಳಗಿನನತೆ ಪ್ರಶ್ನಿಸಿದ್ದಾನೆ . ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ?ನೀರಿನಿಂದಾದ ಮುತ್ತು ನೀರಪ್ಪುದೇ ?ಮೀರಿ ಪೂರ್ವಕರ್ಮವನು ಹರಿದ ಭಕ್ತಗೆಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ ?ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ ?ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ ?ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರ ಚೌಡಯ್ಯ  

ಹಾಲಿನಿಂದಾ ತುಪ್ಪ ಮತ್ತೆ ಹಾಳಾಗುವುದೆ ಕ್ರಿಯೆಯಿಳಿದು. ನೀರಿನಿಂದಾದ ಮುತ್ತು ನೀರಪ್ಪುದೇ ? ನೀರಿನಲ್ಲಿ ಹುಟ್ಟಿದ ಮುತ್ತು ಮತ್ತೆ ನೀರಾಗುವುದೆ.?ಮೀರಿ ಪೂರ್ವಕರ್ಮವನು ಹರಿದ ಭಕ್ತಗೆ ಮತ್ತೆ ಬೇರೆ ಜನ್ಮ ಉಂಟೆ ?ಕಟ್ಟಿಹೆ ಬಿಟ್ಟಿಹೆನೆ೦ಬ ಆತಂಕ ನಿಮಗೇಕೆ ಭಕ್ತರೆ ? ಅರ್ಥವಿಲ್ಲದ ನೆಲೆಯಿಲ್ಲದ ತಪ್ಪಲು ತಂದು ಅನಗತ್ಯ ಒಟ್ಟಲೇಕೊ ? ಜಂಗಮ ಬಂದಲ್ಲಿ ತೆರನರಿತು ಅರ್ಪಿಸಿದಡೆ ಶಿವ ನೋಪ್ಪುವ ಎಂದು ಹೇಳಿದ್ದಾರೆ.ಶರಣರು ಕರ್ಮ ಸಿದ್ಧಾಂತವನ್ನು ಪುನರ್ಜನ್ಮವನ್ನು ಒಪ್ಪಲಿಲ್ಲ ಮತ್ತು ಕಟುವಾಗಿ ವಿರೋಧಿಸಿದರು .ಆದರೆ ಪಲ್ಲಟ ಪರಿವರ್ತನೆ ಭವಿ ಭಕ್ತ ವಿವರಣೆ ಕೊಡುವಾಗ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಮಾರ್ಪಾಡಾದಾಗ ಅದನ್ನು ಒಂದು ಜನ್ಮ ಮತ್ತೊಂದು ಜನ್ಮ ಎಂದು ಕರೆದರು .ನಾವೇ ಒಂದು ಅಪಘಾತದಲ್ಲಿ ಸಿಕ್ಕು ಪಾರಾದಾಗ ” ಸಾಮಾನ್ಯವಾಗಿ ನಾವು ಪುನರ್ಜನ್ಮ ಪಡೆದೆವು ಎಂದು ಹೇಳುವುದು ವಾಡಿಕೆ .ಕಾರಣ ಶರಣರು ಪುನರ್ಜನ್ಮ ಒಪ್ಪಲಿಲ್ಲ.ಹಿಂದಿನ ಜನ್ಮವಿಲ್ಲ ಮುಂದೆ ಇನ್ನೊಂದು ಜನ್ಮವೂ ಇಲ್ಲ .ನುಡಿದಂತೆ ನಡೆ ಇದೆ ಜನ್ಮ ಕಡೆ ಇದು ಶರಣರ ಸ್ಪಷ್ಟವಾಣಿ .ಲಿಂಗಾಯತ ಧರ್ಮವು ಯಾವುದು?—————————————–ಲಿಂಗಾಯತ ಧರ್ಮವು ಮಠಗಳ ಸಂಸ್ಕೃತಿಯದ್ದಲ್ಲ  IT HAS REJECTED MONARCHY .  ಅದು ಮಹಾ ಮನೆಯ ಸಂಸ್ಕೃತಿ.ಲಿಂಗಾಯತ ಧರ್ಮವು ಬ್ರಹ್ಮಚರ್ಯೆ ವಿರೋಧಿಸುತ್ತದೆ. ಅದು ಪ್ರಾಪಂಚಿಕ ಸಾಂಸಾರಿಕ ತತ್ವವನ್ನು ಬೋಧಿಸುತ್ತದೆ. ಇಂದ್ರಿಯ ನಿಗ್ರಹ ಮಹಾಪಾಪ.ಲಿಂಗಾಯತ ಧರ್ಮವು  ಬಾಹ್ಯದಲ್ಲಿ ದೇವರನ್ನು ಕಾಣುವುದಿಲ್ಲ.ತನ್ನ ಅಂತರೊಳಗೆ ದೇವರನ್ನು ಕಾಣುವುದು.ಮಾನವ ಮಹದೇವನಾಗುವದು.ಲಿಂಗಾಯತ ಧರ್ಮವು  ದಾನ ವಿರೋಧಿಸುತ್ತುದೆ ,ಆದರೆ ದಾಸೋಹವನ್ನು  ಪ್ರೋತ್ಸಾಹಿಸುತ್ತದೆ.ಲಿಂಗಾಯತ  ಧರ್ಮವು ವೇದ ಶಾಸ್ತ್ರ ಆಗಮ ವಿರೋಧಿಸುತ್ತದೆ.ಆದರೆ ವಚನಗಳೇ  ಶಾಸನವೆನ್ನುತ್ತದೆ .ವಚನಗಳ ಬದುಕಿನ ಅನುಭವ ಚಿಂತನ.ಲಿಂಗಾಯತ ಧರ್ಮವು ಮಾಟ ಮಂತ್ರ  ಮೂಢ ನಂಬಿಕೆ ಖಂಡಿಸುತ್ತದೆ. ವೈಜ್ಞಾನಿಕತೆ ವೈಚಾರಿಕತೆ ಬೆಳೆಸುತ್ತದೆ. ತರ್ಕವನ್ನು ನಂಬುತ್ತದೆ.ಲಿಂಗಾಯತ ಧರ್ಮವು ಪಂಚಾಂಗ ಮುಹೂರ್ತ ಘಳಿಗೆ ಒಪ್ಪುವದಿಲ್ಲ.ಸರ್ವಕಾಲ ಸುಮಂಗಲ ನಾಳೆ ಬರುವುದು ನಮಗಿಂದೇ ಬರಲೆನ್ನುವ ದಿಟ್ಟ ಧ್ಯೇಯ ಲಿಂಗಾಯತ ಧರ್ಮದಲ್ಲಿ  ಗುಲಾಮಗಿರಿ ದಾಸ್ಯತ್ವವಿಲ್ಲ ,ಭಕ್ತನಲ್ಲಿ ಸ್ವಾಭಿಮಾನ ಸ್ವತಂತ್ರತೆಯಿದೆ ಹಸಿ ದುಡಿದರೆ ತನಗುಂಟು ತನ್ನ ಪ್ರಮಥರಿಗುಂಟು.ಲಿಂಗಾಯತ ಧರ್ಮವು ಆಡಂಬರ ಮೆರವಣಿಗೆ ಒಪ್ಪುವದಿಲ್ಲ. ಸರಳ ಸತ್ಯ ಶುದ್ಧ ಮೌಲ್ಯಯುತ ತತ್ವಗಳ ಆಚರಣೆ.ಲಿಂಗಾಯತ ಧರ್ಮವು ಸ್ಥಾವರ ಮೂರ್ತಿ  ವಿರೋಧಿಸುತ್ತದೆ. ಲಿಂಗಯೋಗ ನಿರಾಕಾರ ನಿರುಪಾದಿತ ಲಿಂಗ ತತ್ವವನ್ನು ಒಪ್ಪುತ್ತದೆ.ಲಿಂಗಾಯತ ಧರ್ಮವು ಜಡ ವಿರೋಧಿ, ಪ್ರಕೃರ್ತಿದತ್ತ ನಿಸರ್ಗ ಜಂಗಮಪ್ರೇಮಿ ಚೈತನ್ಯದಾಯಕ ಕ್ರಿಯಾಶೀಲತೆಯಲ್ಲಿ ಭಕ್ತ ಆನಂದ.ಲಿಂಗಾಯತ ಧರ್ಮವು ಪ್ರಾಣಿ ಬಲಿ ಸುಲಿಗೆ ಶೋಷಣೆ ಖಂಡಿಸುತ್ತದೆ. ಕಾಯಕ ದಾಸೋಹ ಕಡ್ಡಾಯ ಸಕಲ ಜೀವಿಗಳನ್ನು ಪ್ರೀತಿಸುವ ಸಿದ್ಧಾಂತವಾಗಿದೆ.ಲಿಂಗಾಯತ ಧರ್ಮವು ಸೂತಕ ವಿರೋಧಿಸುತ್ತದೆ,ಹುಟ್ಟು ಸಾವು ಸಹಜ ಕ್ರಿಯೆಗಳ ಧರ್ಮ.ಲಿಂಗಾಯತ ಧರ್ಮವು ಜಗತ್ತಿನಲ್ಲಿ ಸಾಂಸ್ಥಿಕರಣ ವಿರೋಧಿಸಿದ ಏಕ ಮೇವ ಧರ್ಮ .ಚರ್ಚು ಗುಡಿ ಮಠ ಆಶ್ರಮ ಬಸದಿ ಮಸೀದೆ ಗುರುದ್ವಾರ ,ಬಸದಿಗಳಿಲ್ಲದ ಮುಕ್ತ ಸಮಾಜವನ್ನು ಕಟ್ಟಿದ ಶರಣರು ಜಗತ್ತಿನ ಸಮತೆಯ ಶಾಂತಿಯ ರಾಯಭಾರಿಗಳು.
ಶರಣರು ರೂಪಿಸಿದ ಜಂಗಮ ತತ್ವ.————————————-
ಜಂಗಮ ಪದ ಶರಣರು ಸಮಾಜವೆಂತಲೂ ತತ್ವ ನಿಷ್ಠ ಸಾಧಕರೆಂತಲೂ ಸಮಷ್ಟಿ ಎಂತಲೂ ಬಳಸಿ ಲಿಂಗವೇ ಜಂಗಮ ಎಂದೆನ್ನುತ್ತಾ  ವ್ಯಕ್ತಿ    ಸಮಷ್ಟಿಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲ ಎಂದು ಹೇಳಿ ಬಸುರಿ -ಇದು ಜಂಗಮ ಪರಿಕಲ್ಪನೆ ಶಿಶು ಭಕ್ತನಾಗುತ್ತಾನೆ .ಇದೆ ರೀತಿ “ಮರಕ್ಕೆ ಬಾಯಿ ಬೇರೆಂದು ತಳೆಯಿಂಕೆ  ನೀರೆರೆದಡೆ  ಮೇಲೆ ಪಲ್ಲವಿಸಿತ್ತು ನೋಡಾ ,ಲಿಂಗದ ಬಾಯಿ ಜಂಗಮವೆಂದು ಪಡಿ ಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನಿವನು.ಆ ಜಂಗಮ ಹರನೆಂದು ಕಂಡು,ನರನೆಂದು ಭಾವಿಸಿದೊಡೆ ನರಕ ತಪ್ಪದು ಕಾಣಾ,ಕೂಡಲಸಂಗಮದೇವ   “ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದ ಲಿಂಗ ಜಂಗಮ ತತ್ವಗಳು ಇಲ್ಲಿ ಕಾಣುತ್ತೇವೆ. ಹೇಗೆ ಮರಕ್ಕೆ  ಬಾಯಿ ಬೇರೋ ಹಾಗೆ ಲಿಂಗದ ಬಾಯಿ ಜಂಗಮ ಅಂದರೆ ಸಮಾಜ .ಸಮಾಜದ ವ್ಯಕ್ತಿಯನ್ನು ಹರನೆಂದು ನಂಬಿ ಪ್ರೀತಿಯಿಂದ ನೋಡಬೇಕಾದವರು ನರನೆಂದು ಕಡೆಗಣಿಸಿದರೆ ಸ್ವರ್ಗವೂ   ಕೂಡಾ ನರಕವೇ ಎಂದು ಎಚ್ಚರಿಸಿದ್ದಾರೆ ಬಸವಣ್ಣನವರು. ಜಂಗಮ ಜಾತಿಯಲ್ಲ ಅದು ಸಮಾಜ .ಲಿಂಗ ತತ್ವವನ್ನು ಪ್ರಾಣದಲ್ಲಿ ಇತ್ತು ನಿರುಪಾದಿತವಾಗಿ ಗೌರವಿಸುವ ಸುಂದರ ಸಮತೆಯ ವ್ಯವಸ್ಥೆ- ಇಂತಹ ಸಮತೆಯ ಜಂಗಮ ವ್ಯವಸ್ಥೆಯನ್ನು ಬಸವಣ್ಣ ಮತ್ತು ಶರಣರು  ಅರಿತು ಆಚರಿಸಿದಲ್ಲದೆ ಅವರು ತಾವು ಕಂಡ ಸತ್ಯವನ್ನು ಮುಕ್ತ ವಚನಗಳಲ್ಲಿ ವ್ಯಕ್ತಗೊಳಿಸಿದ್ದಾರೆ.ಅನುಭಾವವೇ ಜಂಗಮ -ಜಂಗಮವೂ ಕೂಡಾ ಉಪಾದಿತ ವ್ಯವಸ್ಥೆಯಲ್ಲ. ಶ್ರೇಣೀಕೃತ ವ್ಯವಸ್ಥೆಯನ್ನು ಸರಳಗೊಳಿಸುವ ಜಂಗಮ ನೀತಿಯು ಮುಂದೊಂದು ದಿನ ಜಾತಿ ವ್ಯವಸ್ಥೆಗೆ ಕಾರಣವಾಯಿತು ಎಂದೆನಿಸಿದೆ . ಜಾತಿ ಜಂಗಮವು ಲಿಂಗಾಯತರೊಳಗಿನ ಬ್ರಾಹ್ಮಣೀಕರಣ ವಾಗಿ ನಿರ್ಮಾಣವಾಯಿತು. ಇಂತಹ ಜಂಗಮವು ಮೇಲು ಕೀಳು ಸೃಷ್ಟಿಸಿದ ಉಚ್ಚ ನೀಚ ಪದ್ಧತಿಯನ್ನು ಮರು ಸೃಷ್ಟಿಸಿದ  ಉಪಕರಣವಾಯಿತು.ಅಷ್ಟಾವರಣ- ———————
ಅಷ್ಟಾವರಣವು ಬಸವ ಪೂರ್ವದಲ್ಲಿದ್ದವು ಎಂದು ಕೆಲ ಶೈವವಾದಿಗಳು ಚರ್ಚಿಸುತ್ತಾರೆ. ಗುರು ಲಿಂಗ ಜಂಗಮ  ವಿಭೂತಿ,ಮಂತ್ರ    ರುದ್ರಾಕ್ಷಿ ,ಪಾದೋದಕ ,ಪ್ರಸಾದ  -ಇವುಗಳಿಗೆ ವೈಜ್ಞಾನಿಕ ಕಾರಣ ಕೊಟ್ಟು ಪಂಚ ಮಹಾಭೂತಗಳಿಂದ ಪಂಚೇಂದ್ರಿಯ ಅನುಭಕ್ಕೆ ಬಂದು ಪ್ರಸನ್ನತೆ ಮಾಡುವ ಕಾಯ ಗುಣವಾಗಿವೆ ಎಂದು ಶರಣರು ನಿರೂಪಿಸಿದರು. ಅದನ್ನೇ ಚಾಮರಸ ಹೀಗೆ ಹೇಳಿದ್ದಾನೆ.
ಕಾಯದೊಳು ಗುರು ಲಿಂಗ ಜಂಗಮ ದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿ ಕಾಯವನು ಪಾವನವ ಮಾಡಿದ ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ ).
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಸನಾತನದಲ್ಲಿ ಗುರು ಸರ್ವ ಶ್ರೇಷ್ಠ ಅವನಿಂದಲೇ ಮುಕ್ತಿ ದಾರಿ ತೋರುವ ನಿಜ ಗುರು ಹರನಿಗಿಂತಲೂ ಶ್ರೇಷ್ಠ ಇಂತಹ ಅನೇಕ ಕಲ್ಪನೆಗಳು  ಬಸವಣ್ಣನವರು ಕಿತ್ತೊಗೆದು ,ದೀಪದಿಂದ ದೀಪ ಹಚ್ಚುವ ಪರಿಕಲ್ಪನೆ ಅಥವಾ ಗುರು ತನ್ನ ಕಾರ್ಯ ನಿರ್ವಹಿಸಿ ತಾನು ಶಿಷ್ಯನಲ್ಲಿ ಒಂದಾಗಿ ತಾನು ಗುರು  ಆತ ಶಿಷ್ಯ ಎಂಬ ಬೇರೆ ಭಾವವನ್ನು ಸಂಪೂರ್ಣ ಕಳೆದು ಕೊಳ್ಳುತ್ತಾನೆ .
ಶರಣರು ತಾನು ಮತ್ತು ಶಿವ ಒಂದು ಎಂದು ಸಾಧಿಸಿದ ಮೊದಲ ಪುರುಷರು.ಉಭಯ ಭಾವವನ್ನು ಎಲ್ಲಿಯೂ ಪ್ರತಿಪಾದಿಸದೆ  ಅಂತಹ ಸಂದೇಹ ಗೊಂದಲಗಳನ್ನು ಕಿತ್ತು ಹಾಕಿದರು. ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚಿತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರ ಗೊಳಿಸಿ ,ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಆಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ  ಶರಣ ಮಾರ್ಗ.

 ———————-

Author

14 Comments

 1. I simply wished to thank you so much yet again. I am not sure the things that I would’ve made to happen in the absence of the type of pointers provided by you about this field. It was actually an absolute scary situation in my view, nevertheless viewing a specialised style you treated it forced me to jump for gladness. I am just grateful for your work and hope that you recognize what a powerful job you were getting into training men and women thru your web blog. More than likely you’ve never got to know any of us.

 2. I as well as my friends were actually taking note of the good secrets and techniques found on the blog while quickly got a horrible suspicion I never thanked the blog owner for those tips. All the women ended up as a result very interested to study them and have truly been taking pleasure in those things. Appreciate your genuinely well helpful and for having such high-quality topics most people are really desperate to be informed on. My personal sincere apologies for not saying thanks to you earlier.

 3. My husband and i got quite happy John could deal with his inquiry through the entire precious recommendations he discovered through the blog. It is now and again perplexing to simply find yourself giving away guides which men and women might have been selling. And we acknowledge we’ve got you to be grateful to for that. These explanations you have made, the easy website navigation, the relationships your site make it easier to create – it’s mostly remarkable, and it’s really letting our son in addition to our family imagine that the idea is enjoyable, which is certainly truly vital. Many thanks for the whole thing!

 4. I have to show appreciation to you for rescuing me from such a challenge. Because of browsing throughout the search engines and getting proposals which were not beneficial, I thought my life was over. Existing devoid of the approaches to the difficulties you’ve fixed as a result of your main website is a critical case, and the kind which may have in a wrong way affected my career if I hadn’t come across your website. Your main talents and kindness in dealing with all areas was useful. I am not sure what I would’ve done if I hadn’t come across such a stuff like this. I am able to at this time look ahead to my future. Thank you so much for the impressive and amazing help. I will not think twice to suggest your blog post to anybody who desires support on this subject.

 5. I would like to express some appreciation to you for bailing me out of this particular dilemma. As a result of browsing through the world wide web and meeting tips which were not helpful, I assumed my life was gone. Living minus the solutions to the difficulties you’ve fixed by way of your main posting is a serious case, as well as those which could have in a negative way affected my career if I hadn’t encountered the blog. Your main expertise and kindness in dealing with the whole lot was invaluable. I don’t know what I would have done if I had not come upon such a subject like this. I’m able to at this moment look forward to my future. Thanks for your time so much for the high quality and result oriented help. I won’t be reluctant to refer the blog to any person who should get counselling about this matter.

 6. I enjoy you because of all your labor on this website. My daughter enjoys going through investigation and it is easy to understand why. Almost all hear all concerning the dynamic mode you create both useful and interesting strategies by means of your web blog and therefore welcome participation from others on this area so our own princess is undoubtedly understanding so much. Take pleasure in the remaining portion of the year. You have been conducting a dazzling job.

 7. Thanks so much for providing individuals with an exceptionally wonderful chance to read in detail from this blog. It’s always so kind and also jam-packed with amusement for me and my office fellow workers to visit your site at the least thrice every week to find out the newest items you have. Of course, I am just certainly fascinated for the impressive techniques you serve. Certain two facts in this article are indeed the most suitable we have ever had.

 8. My spouse and i ended up being now excited Chris could conclude his homework through the ideas he grabbed from your own web pages. It’s not at all simplistic to just possibly be giving for free facts which most people could have been trying to sell. And we also consider we’ve got the blog owner to be grateful to for that. All of the illustrations you have made, the simple site menu, the friendships you help to engender – it’s many fabulous, and it is making our son and the family do think the matter is thrilling, which is very vital. Many thanks for all!

 9. I have to express some appreciation to this writer just for bailing me out of this dilemma. Right after searching throughout the search engines and meeting solutions which were not pleasant, I assumed my entire life was well over. Living without the approaches to the difficulties you have sorted out through your post is a crucial case, and ones which could have adversely affected my entire career if I had not noticed your site. Your actual ability and kindness in maneuvering all the details was very useful. I am not sure what I would’ve done if I hadn’t come across such a step like this. I can also at this point relish my future. Thanks a lot so much for the specialized and effective guide. I will not hesitate to recommend the website to anyone who should have care on this matter.

 10. I抦 impressed, I must say. Really hardly ever do I encounter a blog that抯 both educative and entertaining, and let me tell you, you have hit the nail on the head. Your concept is excellent; the issue is something that not sufficient individuals are speaking intelligently about. I am very completely happy that I stumbled across this in my search for something referring to this.

 11. This is the correct weblog for anyone who needs to seek out out about this topic. You notice so much its nearly arduous to argue with you (not that I truly would need匟aHa). You positively put a brand new spin on a topic thats been written about for years. Great stuff, just nice!

 12. Oh my goodness! an incredible article dude. Thanks However I’m experiencing concern with ur rss . Don抰 know why Unable to subscribe to it. Is there anyone getting similar rss problem? Anybody who is aware of kindly respond. Thnkx

Write A Comment