ಬಸವಣ್ಣನವರು ಸುಮಾರು 212 ವಚನಗಳಲ್ಲಿ 336 ಕಡೆ ಜಂಗಮ ಶಬ್ದವನ್ನು ಉಪಯೋಗಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಜಂಗಮ ಶಬ್ದವಿರುವ ಎಲ್ಲಾ ವಚನಗಳನ್ನು ಪರಿಶೀಲಿಸಿದಾಗ ಕಂಡುಬಂದ ಜಂಗಮ ದರ್ಶನ ಬಹು ವಿಸ್ತಾರವಾದುದು.  ಜಂಗಮ ತತ್ವದ ಬಹುಮುಖಗಳನ್ನು ಸೀಮಿತ ಲೇಖನದಲ್ಲಿ ಹಿಡಿದಿಡುವ ಪ್ರಯತ್ನ ಇದು. ಪ್ರಮುಖವಾದ ಜಂಗಮ ರೂಪಗಳು: ವ್ಯಕ್ತಿಯಲ್ಲಿ ಜ್ಞಾನರೂಪ, ಸಮಷ್ಟಿಯಲ್ಲಿ ಸರ್ವ ಜೀವಜಾಲ ಚೈತನ್ಯ ರೂಪ, ಸಾಧನೆಯಲ್ಲಿ ಭಕ್ತನ ಭವ ಬಂಧನ ಕಳೆಯುವ ಹರ ರೂಪ, ಆಚಾರದಲ್ಲಿ ಲಿಂಗ ರೂಪ, ಅರಿವಿನಲ್ಲಿ ಗುರು ರೂಪ, ಹೃದಯ ಕಮಲದಲ್ಲಿ ಅನಾದಿ ಶಿವನ ರೂಪ, ಭಕ್ತ-ಜಂಗಮವೆಂಬ ಭೇರುಂಡ ಮುಖ, ಪ್ರಾಣದಲ್ಲಿನ ಅರಿವೇ ಜಂಗಮ, ಲಿಂಗವೇ ಜಂಗಮ, ಜಂಗಮವೇ ಲಿಂಗ…..
1. ಸಾಧಕನ ಜ್ಞಾನರೂಪವೆ ಜಂಗಮ, ಆಚಾರ ರೂಪವೇ ಭಕ್ತ.ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು ತಪ್ಪದು ನೋಡಯ್ಯಾ. ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ. ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ, ಜ್ಞಾನವನುಳಿದು ತೋರುವ ಘನವ ಕಾಣೆನು. ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ ಸಂಗನಬಸವಣ್ಣನೆಂಬ ಹೆಸರುವಡೆದೆನು. ಅನಾದಿ ಪರಶಿವನು ನೀನೆ ಆಗಿ, ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ, ನಾನೆತ್ತ, ಶಿವತತ್ತ್ವವೆತ್ತಯ್ಯಾ ಕೂಡಲಸಂಗಮದೇವ… 1189.
ಯಾವುದೇ ಕ್ರಿಯೆಗೆ ಜ್ಞಾನವೇ ಮೂಲ. ಜ್ಞಾನವಿಲ್ಲದ ಕ್ರಿಯೆಯಿಲ್ಲ. ಸಂಗ ಜ್ಞಾನವಾದರೆ ಬಸವಣ್ಣ ಆಚಾರ. ಸಂಗ ಜಂಗಮವಾದರೆ ಬಸವಣ್ಣ ಭಕ್ತ. ಜಂಗಮವ ಬಿಟ್ಟು ಆಚಾರವಿಲ್ಲ, ಸಂಗನ ಬಿಟ್ಟು ಬಸವಣ್ಣ ನಿಲ್ಲ. ಹಾಗಾಗಿ “ಸಂಗನಬಸವಣ್ಣ” ನೆಂದರೆ “ಭಕ್ತ ದೇಹಿಕ ಜಂಗಮ” ಅಥವಾ ” ಭಕ್ತ ದೇಹಿಕ ಪರಶಿವ”. 
2. ಅನಾದಿ ಜಂಗಮ ಆದಿ ಭಕ್ತ. ಅನಾದಿ ಶಿವ ಆದಿ ಶಕ್ತಿ. ಆದಿ ಭಕ್ತ, ಅನಾದಿ ಜಂಗಮ, ಆದಿ ಶಕ್ತಿ, ಅನಾದಿ ಶಿವನು ನೋಡಾ. ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ ಎನ್ನ ಹೃದಯಕಮಲದಲ್ಲಿ ನಿಮ್ಮ ಕಂಡೆನು. ಆ ಕಾಂಬ ಜ್ಞಾನವೆ ಜಂಗಮ, ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು. ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು, ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು. ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ, ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ.- 1041
ಭಕ್ತನ ಸುಜ್ಞಾನದಿಂದ ಯಾವ ರೀತಿ ಸದಾಚಾರಹೊರ ಹೊಮ್ಮುತ್ತದೆಯೋ ಅದೇ ರೀತಿ ಶಿವತತ್ವದಿಂದ ಶಕ್ತಿಯ ಉದಯ. ಅನಾದಿ ಶಿವನಿಂದ ಉದಯವಾದ ಆದಿ ಶಕ್ತಿ, ಶಿವತತ್ವವನ್ನು ತನ್ನೊಳಗ ಗರ್ಭೀಕರಿಸಿಕೊಂಡೆ ಮುನ್ನಡೆಯುತ್ತದ್ದೆ. ಶಕ್ತಿಯು  ಸಾಕಾರ ಬ್ರಹ್ಮಾಂಡವಾಗಿ ಸಚರಾಚರವಾಗಿ ಪರಿವರ್ತಿತವಾದರೆ, ಅದರೊಳಗಿನ ಚೇತನ ಅನಾದಿ ಶಿವ. ನೆಲದ ಮರೆಯ ನಿಧಾನದಂತೆ ಶಿವ ಚೇತನವಾಗಿ ಎಲ್ಲ ಸಚರಾಚರಗಳಲ್ಲಿ ಅಡಗುತ್ತಾನೆ. ಅನಾದಿ ಶಿವನನ್ನು ಹೃದಯ ಕಮಲದಲ್ಲಿ ತೋರಿಸುವ ಜ್ಞಾನವೇ ಜಂಗಮ. ಕಂಡಾತನೇ ಭಕ್ತ. ಕಂಡ ಭಕ್ತನ ಆಚಾರವೆಲ್ಲವೂ ಶಿವಮಯ.
3. ನಿರಾಕಾರ ಅನಾದಿ ಶಿವನನ್ನು ಕಾಣಲು ಜ್ಞಾನವೆಂಬ ಜಂಗಮ ವಾಹನ ಬೇಕುಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ. ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ. ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ, ಅಯ್ಯಾ, ನೀನೆನ್ನ ಭವವ ಕೊಂದೆಹೆನೆಂದು ಜಂಗಮಲಾಂಛನವಾಗಿ ಬಂದಡೆ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ.
ಹೃದಯಕಮಲದಲ್ಲಿರುವ ನಿರಾಕಾರ ಅನಾದಿ ಶಿವನನ್ನು ಕಾಣಬೇಕಾದರೆ ಜಂಗಮ ಜ್ಞಾನ ಬೇಕು. ನಿರಾಕಾರ ಅನಾದಿ ಶಿವನೇ ಸತ್, ಅವನ ಶಕ್ತಿ ಸಾಕಾರವೇ ಚಿತ್ ಅಥವಾ ಚೇತನ. ಶಿವ-ಶಕ್ತಿಗಳ ಸಂಗಮವೇ ಅಣು-ರೇಣು-ತೃಣ ಗಳಲ್ಲಿ ನಿತ್ಯ ಚೈತನ್ಯ. ಆ ಚೈತನ್ಯವೇ ತಾನಾಗಿ ಕ್ರಿಯಾಶೀಲನಾದಾತನೇ ಭಕ್ತ. ನಿರಾಕಾರ ಶಿವನನ್ನು ಸಾಕಾರಗೊಳಿಸಲು ಭಕ್ತನ ಚೇತನದ ಅರಿವೇ ಚೈತನ್ಯವೆಂಬ ವಾಹನವಾಗಿ, ಆಚಾರವಾಗಿ ಹೊರಹೊಮ್ಮುತ್ತದೆ. ನಿರಾಕಾರ ಶಿವನ ಸಾಕ್ಷಾತ್ಕಾರವಾಗುತ್ತದೆ. ನಿರಾಕಾರ ಅನಾದಿ ಶಿವನು ಆಕಾರವಾದರೆ, ಜಂಗಮ ಜ್ಞಾನದಿಂದ, ಅರಿವಿನಿಂದ ಸದಾಚಾರದಲ್ಲಿ ನಿರತನಾಗಿ, ಅನುಭಾವದಲ್ಲಿ ನಿರಂತರ ವೃದ್ಧಿಯನ್ನು ಸಾಧಿಸು ಸಾಕಾರ ಶಿವನೇ ವೃಷಭ. ಜಂಗಮ ಜ್ಞಾನದಿಂದ ಸದಾಚಾರದಲ್ಲಿ ನಿರತನಾದ ಭಕ್ತ ಭವಚಕ್ರದಿಂದ ಪಾರಾಗುತ್ತಾನೆ. ಭವಚಕ್ರದಿಂದ ಹೊರಬರಲು ಬಯಸುವ ಭಕ್ತನಿಗೆ ಜಂಗಮವೆ ಭವಹರ. ಪ್ರತಿ ಶ್ವಾಸ-ಉಚ್ಛಾಸದಲ್ಲಿ, ಪ್ರಾಣ ನೆಲೆಗೊಂಡ ಶಿವಸ್ವರೂಪದ ಅರಿವೇ ಜಂಗಮ. ಆ ಸಾಧಕನ ಕಾಯವೇ ಭಕ್ತ, ಪ್ರಾಣವೇ ಜಂಗಮ. 
4. ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ, ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ, ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ. ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ, ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ, ಜಂಗಮಕ್ಕಾದಡೂ ಭಕ್ತಿಯೆ ಬೇಕು, ಭಕ್ತಂಗೆ ಭಕ್ತಿಸ್ಥಲವೆ ಬೇಕು. ಭಕ್ತನ ಅರ್ಥಪ್ರಾಣಾಬ್ಥಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು, ತನುಮನಧನಂಗಳೆಲ್ಲವನೊಳಕೊಂಡು, ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ. ಆ ಜಂಗಮದ ಗಳಗರ್ಜನೆಗೆ ಸೈರಿಸಿ, ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ. ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
ಅನಾದಿ ಶಿವನನು ತನ್ನೊಳಗೆ ಕಂಡ ಸಾಧಕನ ದೇಹಭಾವ-ಜೀವಭಾವವಳಿದು, ಮಲತ್ರಯಗಳಳಿದು ಶುದ್ಧಾಂತಃಕರಣದ  ಭಕ್ತನ ಕಾಯವಾಗುತ್ತದೆ. ಅಂತಹ ಭಕ್ತನ ಹೃದಯ ಕಮಲದಲ್ಲಿ ನಿರಾಕಾರ ಶಿವನಿರುವುದರಿಂದ, ಸಾಕಾರವಾದ ಆತನ ಕಾಯವೇ ಕೈಲಾಸ. ಸಾಕಾರವು ನಿರಾಕಾರವನ್ನು ಧರಿಸಿರುವುದರಿಂದ, ಸಾಕಾರ ಭಕ್ತನ ಪ್ರಾಣವೇ ನಿರಾಕಾರವನ್ನು ತೋರಿಸುವ ಜಂಗಮ. ಹೊರಗೆ ಸಾಕಾರ ಒಳಗೆ ನಿರಾಕಾರ ಭಕ್ತನಾದರೆ, ಹೊರಗೆ ನಿರಾಕಾರ ಒಳಗೆ ಸಾಕಾರ ಜಂಗಮ!. ಭಕ್ತನಲ್ಲಿ ಭಕ್ತಜಂಗಮವೆರಡೂ ಸನ್ನಿಹಿತವಾಗಿದ್ದರೆ, ಜಂಗಮದಲ್ಲಿ ಜಂಗಮಭಕ್ತವೆರಡೂ ಸನ್ನಿಹಿತ. ಒಂದರ ಪ್ರತಿಬಿಂಬವಿನ್ನೊಂದು! ಒಬ್ಬ ಭಕ್ತ ಇನ್ನೊಬ್ಬ ಭಕ್ತನ ಮನೆಗೆ ಅತಿಥಿಯಾಗಿ ಹೋದರೆ, ಆ ಅತಿಥಿಯೇ ಜಂಗಮ. ಅನಾದಿ ಶಿವನನ್ನು ತನ್ನೊಳಗೆ ಕಂಡ “ಅತಿಥಿ ಭಕ್ತ” ಸಾಕ್ಷಾತ್ ಶಿವನಲ್ಲದೆ ಮತ್ತಾರೂ ಅಲ್ಲ. ಮನೆಯಲ್ಲಿದ್ದ ಭಕ್ತನಿಗೆ; ಮನೆಗೆ ಬಂದವರೆಲ್ಲರೂ ಶಿವಸ್ವರೂಪರೇ, ಜಂಗಮ ಸ್ವರೂಪರೇ. ಎಲ್ಲ ಸಚರಾಚರಗಳಲ್ಲಿ ಓತಪ್ರೋತವಾಗಿ ತುಂಬಿಕೊಂಡಿರುವ ಶಿವಚೇತನವನ್ನು ತನ್ನೊಳಗೆ ಕಂಡ ಜಂಗಮ ಸ್ವರೂಪಿ ಭಕ್ತ, ಸರ್ವ ಚೈತನ್ಯಾತ್ಮಕರುಗಳಲ್ಲಿ ತನ್ನ ಸ್ವರೂಪವನ್ನೇ ಕಂಡು ಸಮನ್ವಯನಾಗುತ್ತಾನೆ, ವಿಸ್ತಾರವಾಗುತ್ತಾನೆ, ಸಮಷ್ಟಿಯಾಗುತ್ತಾನೆ, ಸಮಷ್ಟಿ ಹಿತವನ್ನು ಬಯಸುತ್ತಾನೆ. ಆತ ಸಮಷ್ಟಿಯ ಪ್ರತೀಕ.  
5. ಸಮಷ್ಟಿಯ ಪ್ರತೀಕ ಜಂಗಮಕ್ಕೆ ನೀಡಿದರೆ ಲಿಂಗಕ್ಕೆ ಸಂದಿತ್ತು. ಮರಕ್ಕೆ ಬೇರು ಬೇರೆಂದು ತಳಕ್ಕೆ ನೀರನೆರೆದಡೆ ಮೇಲೆ ಫಲವಿಸಿತ್ತು ನೋಡಾ. ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ ಮುಂದೆ ಸಕಳಾರ್ಥವನೀವನು. ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ. 421
ಕಾಣಬಾರದ ಲಿಂಗದ ಬಾಯಿ ಜಂಗಮ .ತನ್ನೊಳಹೊರಗೆ ಶಿವನನ್ನು ಕಂಡ ಭಕ್ತನೇ ಜಂಗಮ. ಆತ ಸಮಷ್ಟಿಯ ಪ್ರತೀಕ. ಆತನಿಗೆ ನೀಡಿದುದು ವ್ಯರ್ಥವಾಗುವುದಿಲ್ಲ. ಅದು ಸಮಾಜಕ್ಕೆ ಸಲ್ಲುತ್ತದೆ; ಎಲ್ಲರಿಗೂ ಸಲ್ಲುತ್ತದೆ. ಹಾಗಾಗಿ, ಆತನಿಗೆ ಕೊಟ್ಟುದುದು ಒಬ್ಬ ವ್ಯಕ್ತಿಗೆ ಕೊಟ್ಟುದುದು ಎಂದು ಭಾವಸಲಾಗದು; ಅದು ಸಮಾಜಕ್ಕೆ ಸಂದ ಸೇವೆ ಎಂದು ಭಾವಿಸಿದರೆ ಮುಂದೆ ಎಲ್ಲರಿಗೂ ಸಕಳಾರ್ಥವನೀವ ಕೂಡಲಸಂಗಮದೇವ. 
6. ಜಂಗಮವೇ ಲಿಂಗ ಕೂಡಲಸಂಗಮದೇವ. ಲಿಂಗದರ್ಶನ ಕರಮುಟ್ಟಿ, ಜಂಗಮದರ್ಶನ ಶಿರಮುಟ್ಟಿ, ಆವುದ ಘನವೆಂಬೆ, ಆವುದ ಕಿರಿದೆಂಬೆ ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದಡೆ ಅರ್ಪಣ ಮುನ್ನವೆ ಇಲ್ಲ, ಗಮನ ನಿರ್ಗಮನವಾಯಿತ್ತು, ಈ ಉಭಯವನರಿಯಲಾಗಿ, ಜಂಗಮವೇ ಲಿಂಗ ಕೂಡಲಸಂಗಮದೇವ. 
ಕಾಣಬಾರದ ನಿರಾಕಾರ ಲಿಂಗಕ್ಕೆ ಏನನ್ನೂ ಅರ್ಪಿಸಲಾಗದು. ಅದು ಅಗಮ್ಯ, ಅಗೋಚರ. ಆ ನಿರಾಕಾರ ಶಿವನೇ ಸಾಕಾರ ಜಗತ್ತಿನ ಸಚರಾಚರಗಳ ಹೃದಯಕಮಲದಲ್ಲಿ ಜಂಗಮ ಚೇತನವಾಗಿ ಅಡಗಿದ್ದಾನೆ. ಆ ಜಂಗಮವೇ ನಿರಾಕಾರ ಶಿವ, ಅಥವಾ ಕಾಣಬಾರದ ಲಿಂಗ, ಅಥವಾ ತಾಳ ಸಂಪುಟಕ್ಕೆ ಬಾರದ ಘನ. ಆ ಜಂಗಮಕ್ಕೆ ಅರ್ಪಿಸಿದುದು ಲಿಂಗಕ್ಕೆ ಅರ್ಪಿತ. 
7. ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು. ಎರೆದಡೆ ನೆನೆಯದು, ಮರೆದಡೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ; ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು. 196
ಲಿಂಗವು ತಾಳಸಂಪುಟಕ್ಕೆ ಬಾರದ ನಿರಾಕಾರ ಅನಾದಿ ಶಿವತತ್ವ ಎಲ್ಲೆಲ್ಲೂ ವ್ಯಾಪಿಸಿಕೊಂಡಿದೆ. ಅದು ಇಲ್ಲದ ಸ್ಥಾನವಿಲ್ಲ; ಹಾಗಾಗಿ ಅದಕ್ಕೆ ಚಲನೆಯಿಲ್ಲ. ಚಲನೆಯಿಲ್ಲದ್ದರಿಂದ ಅದು ಸ್ಥಾವರ!. ಅದಕ್ಕೆ ಎರೆಯಲಾಗದು, ಮರೆಯಲಾಗದು. ಎರೆಯಲು ಹೋದರೆ ನಿರಾಕಾರ. ಮರೆಯಲು ಹೋದರೆ, ಮರೆತ ಮಾನವನ ಶುದ್ಧಾಂತಕರಣದ ಮೂಲದಲ್ಲಿಯೂ ಬಾಡದ ಶಿವಚೇತನ ಜಂಗಮವಾಗಿ ಅಂತರ್ಗತ!. ಅಂತಹ ಚೈತನ್ಯಮಯ ಜಂಗಮಕ್ಕೆ ನೀಡಿದಡೆ, ತಾಳಸಂಪುಟಕ್ಕೆ ಬಾರದ ನಿರಾಕಾರ ಸ್ಥಾವರ ಲಿಂಗಕ್ಕೆ ಸಂದಿತ್ತು! 
8. ಕನ್ನಡಿಯ ನೋಡುವ ಅಣ್ಣಗಳಿರಾ ಜಂಗಮವ ನೋಡಿರೆ!ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ, ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ. `ಸ್ಥಾವರ ಜಂಗಮ ಒಂದೆ’ ಎಂದುದು ಕೂಡಲಸಂಗನ ವಚನ. 187
ಅಂತರಂಗದೊಳಗಿರ್ದ ನಿರವಯಲಿಂಗವೇ ಸಾವಯವಲಿಂಗವಾಗಿ ಕರಸ್ಥಲಕ್ಕೆ ಬಂದು ತನ್ನ ಸ್ವರೂಪದ ಇಷ್ಟಲಿಂಗವಾಗಿದೆ. ಅರಿವಿನಿಂದ ಅದನ್ನು ದೃಷ್ಟಿಸುವುದೇ ಸ್ವರೂಪದ ಧ್ಯಾನ ಅಥವಾ ಸೋಹಂ. ಸ್ವರೂಪದ ಧ್ಯಾನ, ದರ್ಶನ ಮಾಡಿದರೆ ಕನ್ನಡಿಯ ನೋಡಿದ ಹಾಗೆ. ಕೇವಲ ಸೋಹಂ ಎನ್ನದೆ ದಾಸೋಹಂ ಎಂದೆನಿಸಯ್ಯ ಎನ್ನುತ್ತಾರೆ ಬಸವಣ್ಣನವರು. ಅಂದರೆ ಇಷ್ಟಲಿಂಗ ಪೂಜೆಯ ಜೊತೆಗೆ, ಜಂಗಮ ದಾಸೋಹ ಮಾಡಲೇಬೇಕು. ಜಂಗಮ ಎಂದರೆ ಸರ್ವ ಜೀವ ಜಾಲ ಅಥವಾ ಸಚರಾಚರಗಳಲ್ಲಿರುವ ಜೈವಿಕ ಚೇತನ. ಅಂತಹ ಜಂಗಮದೊಳಗೆ ಲಿಂಗಯ್ಯ ಸನ್ನಿಹಿತ. ತಾಳಸಂಪುಟಕ್ಕೆ ಬಾರದ, ಚಲನೆಯಿಲ್ಲದ ಸ್ಥಾವರ ತತ್ವವಾದ ಲಿಂಗವೇ ಜಂಗಮ. ಆದ್ದರಿಂದ ಲಿಂಗ-ಜಂಗಮ ಒಂದೆ ಎಂಬುದು ಬಸವಣ್ಣನವರ ಅನುಭಾವ. 
9. ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ194
ಕಲ್ಲ ನಾಗರ ಮತ್ತು ಉಣ್ಣದ ಲಿಂಗ ಸ್ಥಾವರಗಳು. ಅಲ್ಲಿ ಚೇತನವಿಲ್ಲ. ಅವು ಉಣ್ಣುವುದಿಲ್ಲವೆಂದು ಗೊತ್ತಿದ್ದರೂ ಮೌಧ್ಯತೆಯಿಂದ ವಿಚಾರಿಸದೆ ಹಾಲನೆರೆಯುವದು, ನೈವೇದ್ಯವ ಹಿಡಿಯುವ ಮೂಢರು ಜಂಗಮಾತ್ಮಕವಾದ ದಿಟದ ನಾಗರ, ಹಸಿದ ವ್ಯಕ್ತಿ ಬಂದರೆ ತಿನ್ನಲು ಕೊಡುವುದಿಲ್ಲ. ಕೂಡಲಸಂಗನ ಶರಣರು ಅನುಭಾವಿಗಳ ಮಾತುಗಳನ್ನು ಉದಾಸೀನ ಮಾಡುವ ಡಾಂಭಿಕ ಜನರ ಅಸ್ತಿತ್ವ, ಕಲ್ಲಿಗೆ ಬಡಿದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಮಣ್ಣಿನ ಹೆಂಟೆಯಂತೆ. 
10. ಲಿಂಗ-ಜಂಗಮಗಳು ಭಕ್ತನ ಕಾಯದ ಎರಡು ಮುಖಗಳು.ಭೇರುಂಡನ ಪಕ್ಷಿಗೆ ದೇಹ ಒಂದೆ, ತಲೆಯೆರಡರ ನಡುವೆ ಕನ್ನಡವ ಕಟ್ಟಿ ಒಂದು ತಲೆಯಲ್ಲಿ ಹಾಲನೆರೆದು ಒಂದು ತಲೆಯಲ್ಲಿ ವಿಷವನೆರೆದಡೆ ದೇಹವೊಂದೇ, ವಿಷ ಬಿಡುವುದೇ ಅಯ್ಯಾ ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.
ಭೇರುಂಡನ ಪಕ್ಷಿಗೆ ದೇಹ ಒಂದು, ಮುಖ ಎರಡು. ಒಂದು ಮುಖಕ್ಕೆ ಹಾಲು, ಮತ್ತೊಂದಕ್ಕೆ ವಿಷವನೆರೆದಡೆ, ದೇಹವೊಂದೇ ಆಗಿರುವುದರಿಂದ ಭೇರುಂಡಪಕ್ಷಿಯ ದೇಹ ವಿಷಮಯ ವಾಗುವದು ಖಚಿತ. ಅರಿವಿನ ಕುರುಹು ಲಿಂಗವಾದರೆ, ತನ್ನ ಚೇತನದ ವಿಸ್ತಾರವೇ ಜಂಗಮ. ಲಿಂಗ-ಜಂಗಮಗಳು ಭಕ್ತನ ಕಾಯದ ಎರಡು ಮುಖಗಳು. ಒಂದು ಮುಖಕ್ಕೆ ಹಾಲನೆರೆದು ಮತ್ತೊಂದಕ್ಕೆ ವಿಷವನೆರೆಯಲಾಗದು. ಲಿಂಗಾನುಸಂಧಾನ ಮತ್ತು ಜಂಗಮ ದಾಸೋಹ ಎರಡೂ ಜೊತೆ-ಜೊತೆಗೇ ನಡೆಯಬೇಕು. 
11. ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ ಭವಬಂಧನಭವಬಂಧನ ಭವಪಾಶವಾದ ಕಾರಣವೇನಯ್ಯಾ ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ. ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ 7ಈ ಕ್ಷಣದಲ್ಲಿ ಲಿಂಗ ಸ್ವರೂಪವ ಮರೆತರೆ ಅಥವಾ ಸಿರಿ-ಸಂಪತ್ತಿಗೆ ಅಂಟಿಕೊಂಡು ದೇಹಭಾವಕ್ಕೊಳಗಾದರೆ, ಮುಂದಿನ ಕ್ಷಣಗಳಲ್ಲಿ ಭವ ಬಂಧನ, ಭವಪಾಶ. ಹಿಂದಣ ಕ್ಷಣಗಳ ಮರೆವು ಮುಂದಣ ಕ್ಷಣಗಳಲ್ಲಿ ದುಃಖದ ಜನನ.
12. ಗುರು-ಲಿಂಗ-ಜಂಗಮ-ಪ್ರಸಾದ-ಪಾದೋದಕ ಪಥದಲ್ಲಿ ನಡೆದರೆ ಭವವಿಲ್ಲ.ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ ಬಹುಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು. ಎನಗೆ ಗುರುಪಥವ ತೋರಿದವರಾರು ಲಿಂಗಪಥವ ತೋರಿದವರಾರು ಜಂಗಮಪಥವ ತೋರಿದವರಾರು ಪಾದೋದಕ ಪ್ರಸಾದಪಥವ ತೋರಿದವರಾರು ತೋರುವ ಮನವೆ ನೀವೆಂದರಿತೆ. ಎನಗಿನ್ನಾವ ಭವವಿಲ್ಲ, ಕೂಡಲಸಂಗಮದೇವಾ.ಅರಿವು-ಆಚಾರ-ಅನುಭಾವವಿಲ್ಲದ ಜೀವನ ಕೊನೆಯಿಲ್ಲದ ಭವಬಂಧನ. ಕಾಯದೊಳು ಗುರು-ಲಿಂಗ-ಜಂಗಮವ ನರಿದಾತನ ಬದುಕು ಅರಿವು-ಆಚಾರ-ಅನುಭಾವಮಯ. ಆತ ಪರಮ ಸುಖಿ. ಆತನಿಗೆ ಭವವಿಲ್ಲ.
13. ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.ಜನ್ಮ ಜನ್ಮಕ್ಕೆ ಹೊಗಲೀಯದೆ, ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ. ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.
ಶ್ವೇತಾಶ್ವತರ ಉಪನಿಷತ್ತು ನಾವು ಶಿವ ಸ್ವರೂಪವೆಂಬುದನ್ನು ಎತ್ತಿ ಹಿಡಿಯುತ್ತದೆ. ಶಂಕರಾಚಾರ್ಯರು ತಮ್ಮ ನಿರ್ವಾಣ ಷಟಕಮ್ ನಲ್ಲಿ.. ಮನೋಬುಧ್ಯಹಂಕಾರ ಚಿತ್ತಾನಿನಾಹಂ…..ಚಿದಾನಂದ ರೂಪ ಶಿವೋಹಂ ಎಂದು ಬರೆದು ಸೋಹಂ ತತ್ವವನ್ನು ಪ್ರಚಾರಗೊಳಿಸಿದರು. ಬಸವಣ್ಣನವರು ಸೋಹಂ ಎಂದು ಕೇವಲ ಜ್ಞಾನಿಗಳಾಗದೆ, ಕ್ರಿಯಾಜ್ಞಾನಿಗಳಾದರು. ಸೋಹಂ ಎಂಬುದನ್ನು ಸಾರ್ವತ್ರೀಕರಣ ಗೊಳಿಸಿದರು, ಜಂಗಮಗೊಳಿಸಿದರು. ನಾನು ಶಿವಸ್ವರೂಪ ವಷ್ಟೆ ಅಲ್ಲ, ಸಕಲ್ ಜೀವಜಾಲವೆಲ್ಲವೂ ಶಿವಸ್ವರೂಪವೆಂದು ಅನುಭಾವಿಸಿ ಜಂಗಮದ ಸಮತೆಯನ್ನು ಕಂಡರು. ಜಂಗಮಕ್ಕೆ ಧನವನೆರೆದರು. ಇವನಾರವನೆಂದೆನ್ನದೆ ದಾಸೋಹಂ ಎನ್ನುತ್ತ ಹಸಿದ ಒಡಲಿಗೆ ಅನ್ನವನಿಕ್ಕಿ, ಶಿವಜ್ಞಾನದ ದಾಸೋಹವನ್ನು ಮಾಡಿ, ಸಮಷ್ಟಿಯ ಆಧ್ಯಾತ್ಮ ಕ್ರಾಂತಿಗೆ ಮುನ್ನುಡಿ ಬರೆದರು.
– ಶಿವಶರಣಪ್ಪ ಮದ್ದೂರ್ – ಬೆಂಗಳೂರು- 8904656742

Author

10 Comments

  1. After study just a few of the weblog posts on your website now, and I truly like your way of blogging. I bookmarked it to my bookmark website list and can be checking back soon. Pls try my web page as effectively and let me know what you think.

  2. Thank you for every one of your efforts on this site. My mum takes pleasure in carrying out investigations and it’s simple to grasp why. Many of us hear all concerning the powerful manner you render practical strategies by means of your web blog and even boost contribution from people on this matter plus our princess is now studying so much. Have fun with the remaining portion of the new year. You have been doing a glorious job.

  3. I wish to voice my passion for your generosity giving support to visitors who require guidance on this important niche. Your real dedication to passing the message all over came to be wonderfully beneficial and have regularly helped associates just like me to realize their pursuits. This interesting facts denotes a whole lot to me and additionally to my colleagues. Thank you; from all of us.

  4. I must show my thanks to you for rescuing me from this particular challenge. After scouting throughout the internet and getting ways which are not productive, I believed my entire life was gone. Living minus the approaches to the issues you’ve solved all through your entire website is a serious case, as well as those that could have in a negative way affected my entire career if I had not discovered your web blog. That talents and kindness in dealing with almost everything was crucial. I don’t know what I would’ve done if I hadn’t come upon such a stuff like this. I can now look ahead to my future. Thank you so much for your reliable and effective guide. I won’t hesitate to refer the sites to anyone who wants and needs tips on this situation.

  5. I precisely wished to say thanks once again. I’m not certain what I could possibly have used without the type of aspects discussed by you over my question. It had been the fearsome scenario in my view, but noticing a new well-written way you processed the issue forced me to leap with happiness. I’m just happy for the advice and trust you realize what a great job that you are doing teaching the rest using your website. I’m certain you’ve never come across all of us.

  6. Needed to write you a tiny observation to finally give thanks as before considering the pleasant advice you’ve shown on this website. It is really wonderfully generous of people like you to make extensively what exactly most of us would have supplied for an e book to end up making some profit for themselves, even more so now that you might have done it if you desired. Those creative ideas in addition acted like the great way to be aware that the rest have similar interest just as my own to find out way more when it comes to this issue. I am certain there are some more fun instances ahead for people who take a look at your site.

  7. My husband and i were quite contented that Albert managed to finish up his homework from your ideas he had through your site. It is now and again perplexing just to be giving freely steps that other folks may have been making money from. And we all realize we’ve got you to thank for this. The illustrations you’ve made, the straightforward blog menu, the relationships you can make it possible to instill – it’s got many wonderful, and it’s letting our son and the family consider that that article is exciting, which is certainly quite serious. Many thanks for the whole thing!

  8. Thank you so much for giving everyone an exceptionally pleasant chance to discover important secrets from this website. It’s usually very lovely and as well , full of a good time for me personally and my office mates to search your blog at least thrice a week to learn the latest things you have got. Not to mention, I’m also certainly fulfilled considering the surprising techniques you serve. Some two ideas in this post are essentially the most impressive we have ever had.

  9. A lot of thanks for every one of your work on this site. Kim takes pleasure in conducting internet research and it’s really obvious why. A number of us learn all concerning the compelling method you provide useful guidance on your web site and even boost response from other people on the concept while our own girl is undoubtedly learning so much. Take advantage of the rest of the year. Your conducting a fabulous job.

  10. I would like to show my appreciation for your kindness for individuals who must have guidance on that field. Your special commitment to passing the message all around turned out to be incredibly helpful and has continuously helped guys much like me to arrive at their desired goals. Your entire helpful guidelines can mean a whole lot to me and even further to my office workers. Thanks a lot; from all of us.

Write A Comment