ಎನ್ನ ಕರಸ್ಥಲವೇ ಬಸವಣ್ಣನಯ್ಯ
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ
ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ   
ಮಹಾಲಿಂಗ ಗಜೇಶ್ವರ
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.
                                         ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7

ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ  ಹೇಗೆ ಅಳವಡಿಸಿಕೊಂಡನು ಮಸಣಯ್ಯ   ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .

ಎನ್ನ ಕರಸ್ಥಲವೇ ಬಸವಣ್ಣನಯ್ಯ
———————————-
ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ   ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ  ಗಜೇಶ ಮಸಣಯ್ಯ .

ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ.

 ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ )

ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ  ಜಂಗಮವಾಗಿ    ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ.

ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ

————————————–
ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ  ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು  ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು.

ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,

———————————–
ಇಷ್ಟಲಿಂಗ ಬಸವಣ್ಣ  ಪ್ರಾಣಲಿಂಗ ಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ   ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರುಹು  ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರ
ಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು.

ಇಂತೆನ್ನ ಕರ ಮನ ಭಾವಂಗಳಲ್ಲಿ    ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ
——————————————————————————

ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು  ಮನವನ್ನು ಭಾವವನ್ನು ಶುದ್ಧ ಮಾಡುವ 
ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು   ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲು
ಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.
ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ  ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ.

ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.
————————————————————————————————–

ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರು
ತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.

ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ   ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅಂತಹ  ಎತ್ತರದ ನಿಲುವನ್ನು ಕಾಣಲು ಸಾಧ್ಯ
————————————–
ಡಾ.ಶಶಿಕಾಂತ.ಪಟ್ಟಣ ಪುಣೆ

Author

10 Comments

  1. I have to show my appreciation to this writer just for bailing me out of this type of circumstance. Just after searching through the world-wide-web and obtaining opinions which were not helpful, I thought my entire life was over. Living without the answers to the difficulties you’ve fixed through your main website is a critical case, as well as ones that could have adversely damaged my career if I hadn’t discovered your web page. Your good understanding and kindness in taking care of all areas was tremendous. I’m not sure what I would have done if I had not come across such a point like this. I can also at this time look forward to my future. Thanks for your time very much for the expert and sensible guide. I won’t think twice to propose the blog to anybody who will need guide on this issue.

  2. I precisely had to appreciate you again. I am not sure the things I might have tried in the absence of the concepts provided by you about such topic. It had become a scary case in my position, however , taking a look at the expert avenue you resolved that took me to leap for gladness. I’m just happier for the service as well as expect you are aware of an amazing job that you’re providing teaching men and women thru your webblog. I am certain you’ve never encountered any of us.

  3. I wish to express my appreciation to you for bailing me out of such a predicament. After scouting through the the web and seeing opinions which were not powerful, I was thinking my life was gone. Being alive without the approaches to the issues you’ve resolved as a result of the website is a serious case, as well as ones which could have adversely affected my entire career if I hadn’t noticed your web site. Your know-how and kindness in dealing with all things was crucial. I’m not sure what I would’ve done if I hadn’t discovered such a subject like this. I can also at this moment look ahead to my future. Thanks very much for your skilled and results-oriented guide. I won’t be reluctant to endorse your web blog to anybody who ought to have guidance about this area.

  4. I simply had to appreciate you once again. I am not sure the things I would’ve achieved without the type of secrets provided by you regarding such a situation. It became an absolute frightful problem in my circumstances, nevertheless discovering a specialized form you resolved it forced me to jump over delight. I’m just happier for your work and in addition hope you recognize what a great job your are putting in educating other individuals through the use of your web blog. I know that you’ve never got to know any of us.

  5. I happen to be commenting to let you be aware of of the wonderful experience my friend’s girl found reading your web page. She realized numerous pieces, including how it is like to have a great helping nature to let many others smoothly know precisely a variety of complicated topics. You truly exceeded readers’ desires. Thanks for distributing these good, safe, educational and even fun tips on this topic to Lizeth.

  6. Thank you a lot for providing individuals with a very memorable chance to check tips from this website. It is often so terrific and jam-packed with fun for me and my office colleagues to search your site not less than 3 times every week to see the latest guidance you have got. Not to mention, I’m actually happy with the spectacular advice you give. Some 4 tips in this posting are unequivocally the most suitable we’ve had.

  7. Thank you a lot for giving everyone a very brilliant opportunity to read from this web site. It is always so fantastic and as well , packed with a lot of fun for me and my office co-workers to search the blog minimum thrice in a week to read the fresh secrets you have. And of course, I am just always motivated concerning the astonishing pointers you give. Some 2 tips in this post are undeniably the very best we have had.

  8. Thank you so much for providing individuals with such a nice opportunity to read articles and blog posts from here. It can be so kind and as well , packed with fun for me personally and my office peers to visit your web site no less than 3 times every week to read through the new things you have. Not to mention, I’m so certainly fulfilled considering the extraordinary ideas served by you. Selected two points in this post are essentially the simplest I have ever had.

  9. I’m just writing to let you know what a remarkable experience my friend’s girl had reading through the blog. She learned some pieces, not to mention how it is like to have an amazing teaching character to get many others quite simply completely grasp selected multifaceted subject areas. You truly surpassed people’s expectations. Thank you for offering the informative, trustworthy, explanatory and as well as cool guidance on this topic to Janet.

  10. I’m just writing to make you know of the really good experience my wife’s princess gained studying your web page. She even learned a lot of details, including what it is like to have an incredible teaching mindset to make many others with no trouble comprehend specified multifaceted subject areas. You actually did more than our own expected results. Thanks for showing those practical, healthy, explanatory as well as unique thoughts on the topic to Jane.

Write A Comment