ಜಗತ್ತಿನ ಎಲ್ಲ ಸಂತ, ದಾರ್ಶನಿಕರಲ್ಲು ಆನಂದದ ಹುಡುಕಾಟದಲ್ಲಿ ಒಂದು ಸೆಳೆತ, ತುಡಿತ ಕಾಡಿದೆ.  ಅದಕ್ಕಾಗಿ ಹಲವು ಮಜಲುಗಳಲ್ಲಿ ಸಾಗುವ ಅವರ ಪಥ ಒಂದಕ್ಕಿಂತ ಒಂದು ವಿಭಿನ್ನ.  ಅವು ಕಾಲದಿಂದ ಕಾಲಕ್ಕೆ ಬೆಳವಣಿಗೆಗಳನೂ ಕಂಡಿವೆ.  ಎಲ್ಲ ಧರ್ಮಗಳ ಸಾರವನ್ನು ಅರಿತು , ನುರಿತು, ಅನ್ವೇಷಿಸಿದ ಬಸವ ಪ್ರಣೀತ ಧರ್ಮದಲ್ಲಿ ಎಲ್ಲ ಭ್ರಮಾಧೀನ ಕುರುಡು ಆಚರಣೆಗಳು ಕಳಚಿಕೊಂಡು ನವೀನ ಮೌಲಿಕ ಬದುಕಿನತ್ತ ಮುಖಮಾಡಿದವು.  ಅದರಲ್ಲಿ ಬೆಳಗಿದ ಶರಣ ಚೇತನಗಳು ಅಸಂಖ್ಯ.  ಅದರಲ್ಲೇ ಬೆಳಗಿದ ಮಹಾ ಚೇತನ ಅಕ್ಕ ಮಹಾದೇವಿ ಎಂಬ ಆಧ್ಯಾತ್ಮಿಕ ಶಿಖರ. ಸಹಜ, ಸಾಮಾನ್ಯ ಬದುಕಿನೊಂದಿಗೆ ಅಸಾಮಾನ್ಯ ಹೊಳಹುಗಳನ್ನು ಮುಖಾಮುಖಿ ಆಗಿಸುತ್ತಾ ನಡೆದ ಅಕ್ಕ ಮಹಾದೇವಿಯ ಬದುಕು ಶರಣ ಸಂಕುಲದಲ್ಲೇ ಮುಕುಟಪ್ರಾಯವಾದುದು. ಬಾಲ್ಯದಿಂದಲೇ “ಗುರುವೆಂಬ ತೆತ್ತಿಗ ಲಿಂಗವೆಂಬ ಅಲಗನು ಮನನಿಷ್ಟೆಯೆಂಬ ಕೈಯಲ್ಲಿ ಕೊಡಲು ಅಕ್ಕಳ ಆಧ್ಯಾತ್ಮಿಕ ಶೋಧನೆಯ ಪಯಣ ಆರಂಭವಾಗಿದೆ. ಸಾಮಾನ್ಯವಾಗಿ ಎಲ್ಲ ಶರಣರಲ್ಲೂ ವಿಕಾಸದ ಹಂತಗಳು ಗೋಚರವಾಗುತ್ತವೆ.  ಅದು ಲಿಂಗವಿಡಿದು ಲಿಂಗವಾಗುವ ಪ್ರಕ್ರಿಯೆ.  ಲಿಂಗವಿಡಿದು ಜಂಗಮವಾಗುವ ಪ್ರಕ್ರಿಯೆ. ಸಾಮಾನ್ಯರಂತೆ ಹುಟ್ಟಿ ಸಾಮಾನ್ಯರಂತೆ ಬದುಕನ್ನು ಅಪ್ಪಿಕೊಂಡು ಅವರು ಬೆಳೆದ ರೀತಿ , ಅವರು ನಡೆದ ದಾರಿ, ಸೇರಿದ ಗಮ್ಯ ಅವರನ್ನು ಅಸಾಮಾನ್ಯರನ್ನಾಗಿ ಮಾಡಿ ಬಿಡುವವು.  
ಅದೇರೀತಿ ಅರಿವಿಗಾಗಿ ಕುರುಹು ಹಿಡಿದು ಅರಿವೇ ಆಗಿಬಿಡುವ ಅಕ್ಕನ ಲಿಂಗ ವಿಕಾಸದ ವಿಭಿನ್ನ ಹಂತಗಳನ್ನು ಅವಳದೇ ವಚನಗಳ ಮುಖಾಂತರ ನೋಡುವಾ.  
ಅಂಗೈಯೊಳಗಣ ಲಿಂಗವ ಪೂಜಿಸುತ್ತ , ಮಂಗಳಾರತಿಗಳನು ತೊಳಗಿ ಬೆಳಗುತ್ತಿದ್ದೆ ನೋಡಯ್ಯಾ, ಕಂಗಳ ನೋಟ ಕರುವಿಟ್ಟ ಭಾವ , ಹಿಂಗದ ಮೋಹ, ತೆರಹಿಲ್ಲದಿರ್ದೆ ನೋಡಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ
ಎಂದು ಪ್ರಾರಂಭವಾದ ಅಕ್ಕಳ ಇಷ್ಟಲಿಂಗ ಯೋಗ, ನಿರಂತರವಾಗಿ ನಡೆದಿದೆ.  ಒಬ್ಬ ಸಾಧಕನ ಪ್ರಾಥಮಿಕ ಹಂತ.  ಇಲ್ಲಿ ಅಕ್ಕ ಬರೀ ಪೂಜೆಗೈಯುತ್ತಿಲ್ಲ, ಅದರ ಹಿಂದಿನ ಅನ್ವಯಗಳನೂ ಹೇಳುವಳು……,ಸಜ್ಜನೆಯಾಗಿ ಮಜ್ಜನಕೆರೆವದು, ಶಾಂತಳಾಗಿ ಪೂಜೆ ಮಾಡುವುದು, ಹುಸಿಯನಾಡದಿರುವದು( ಹುಸಿಯನಾಡಿ ಲಿಂಗವ ಪೂಜಿಸಿದರೆ ಹೊಳ್ಳ ಬಿತ್ತಿ ಫಲವ ಅರಸುವಂತೆ).
ಹೀಗೆ ನಿರ್ಮಲ ಬದುಕನಪ್ಪಿಕೊಂಡು ನಿಷ್ಕಾಮವಾಗಿ ಪೂಜಿಸುವದು.  ಅಯ್ಯಾ ನೀ ಕೇಳಿದರೆ ಕೇಳು ಕೇಳದಿದ್ದರೆ ಮಾಣು,ನಾ ನಿನ್ನ ಹಾಡಿಲ್ಲದೆ ಸೈರಿಸಲಾರೆನಯ್ಯಾ……. ಅಯ್ಯಾ ನೀ ಒಲಿದರೆ ಒಲಿ ಒಲಿಯದಿದ್ದರೆ ಮಾಣು, ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯಾ…… ಎಂದು ಹಾಡುವ ಅಕ್ಕನ ಪೂಜಾ ನಿಷ್ಟೆ ನಿರಂತರವಾಗಿ ನಡೆದಿದೆ.  ಅದೇ ಭಾವ ಬಲಿತಂತೆ   ಅಕ್ಕಳ ಮನೋಸ್ತರಗಳಲ್ಲೂ ಬದಲಾವಣೆ ಗೋಚರವಾಗುವವು.  ಹೇಗೆ  ನೋಡುವಾ……
ಅಷ್ಟ ವಿಧಾರ್ಚನೆ ಮಾಡಿ ಒಲಿಸುವೆನೆ ಅಯ್ಯಾ, ನೀನು ಬಹಿರಂಗ ವ್ಯವಹಾರ ದೂರಸ್ಥನು , ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ , ನೀನು ವಾಙ್ಮನಕ್ಕತೀತನು, ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ ನೀನು ನಾದಾತೀತನು , ಭಾವ ಜ್ಞಾನ ದಿಂದ ಒಲಿಸುವೆನೆ ಅಯ್ಯಾ ನೀನು ಮತಿಗತೀತನು,ಹೃದಯಕಮಲದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ ನೀನು ಸರ್ವಾಂಗ ಪರಿಪೂರ್ಣನು ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ , ಚೆನ್ನಮಲ್ಲಿಕಾರ್ಜುನಯ್ಯಾ. 
ಎಂದು ಅಷ್ಟವಿಧಾರ್ಚನೆ, ವಾಕು, ಮನ, ಜಪ, ಸ್ತೋತ್ರ ಎಲ್ಲವುಗಳಿಗೆ ಅತೀತವಾದುದು ಲಿಂಗ ಎಂಬ ಪ್ರಜ್ಞೆ ಅಕ್ಕಳಲ್ಲಿ ಜಾಗೃತವಾಗಿದೆ.  ಎಲ್ಲ ಆಚರಣೆಗಳೂ ಒಂದು ಹಂತದವರೆಗೆ ಮಾತ್ರ .  ಅರಿವು ಮುನ್ನಲೆಗೆ ಬಂದಾಗ ಎಲ್ಲ ಉಪಾಧಿಗಳು ತಾವಾಗೇ ಕಳಚಿಕೊಳ್ಳುವವು.ಅದನೇ ಅಕ್ಕ ಹೇಳುವಳು…ಆಕಾರವಿಲ್ಲದ ನಿರಾಕಾರಲಿಂಗವ ಕಟ್ಟಿದೆವೆಂಬರು ಅಜ್ಞಾನಿಜೀವಿಗಳು …ತನ್ನ ತಾನರಿದು ತಾನಾದಡೆ ಚೆನ್ನಮಲ್ಲಿಕಾರ್ಜುನ ಬೇರಿಲ್ಲ ಎನ್ನುವ ಅಕ್ಕನ ಲಿಂಗಪಥದಲ್ಲಿ ಈಗ ತೀವ್ರತರವಾದ ಬದಲಾವಣೆಗಳಾಗಿವೆ. ಅಕ್ಕಳ ಲಿಂಗದ ಹೊರಮುಖಿ ಶೋಧನ ಈಗ ಒಳಮುಖವಾಗಿದೆ.  ಆದರೆ ಅರಿವು ಸಾಧ್ಯವಾಯಿತ್ತೆಂದು ಗುರುಲಿಂಗಜಂಗಮವ ಬಿಡಬಹುದೆ ಎಂದು ಮುಂದೆ ಸಾಗಿದೆ ಪಯಣ.  ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಸಿದ್ದ ಅಕ್ಕಳಿಗೆ ಈಗ ದಾರಿ ಸ್ಪಷ್ಟವಾಗಿದೆ. 
ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು, ಮನ ಅರಿವಿಗರ್ಪಿಸಿ ಮನ ಲಯವಾಯಿತ್ತು.ಭಾವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು ಅಂಗಮನಭಾವವಳಿದ ಕಾರಣ ಕಾಯ ಅಕಾಯವಾಯಿತ್ತು.  ಎನ್ನ ಕಾಯದ ಸುಖಭೋಗವ ಲಿಂಗವೇ ಭೋಗಿಸುವನಾಗಿ ಶರಣಸತಿಲಿಂಗಪತಿಯಾದೆನು ಇದು ಕಾರಣ ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರೆಸಿದೆನುಎಂದು ಶರಣ ಸತಿ ಲಿಂಗಪತಿ ಭಾವ ಬಲಿತ ಅಕ್ಕ ಈಗ ನಿರ್ಭೀತಳಾಗಿ ಸಾಗಿರುವಳು.  ಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆ ,ಲೌಕಿಕ್ಕೊಬ್ಬ ಗಂಡನೆ ಪಾರಮಾರ್ಥಕ್ಕೊಬ್ಬ ಗಂಡನೆ ……ಲೌಕಿಕ ಪಾರಮಾರ್ಥ ಎರಡನೂ ಹಿಡಿಯಲು ಬಾರದಯ್ಯಾ ಎಂದು ಲೋಕದ ಸಾವ ಕೆಡುವ ಗಂಡರನ್ನು ತಿರಸ್ಕರಿಸಿದ ಅಕ್ಕ ಸಾವಿಲ್ಲದ ಕೇಡಿಲ್ಲದ, ರೂಹಿಲ್ಲದ ಚೆಲುವ ಚೆನ್ನಮಲ್ಲಿಕಾರ್ಜುನನ ಸೇರುವ ಹಂಬಲದಿಂದ ಹಾತೊರೆಯುತಿರುವಳು.   ಕಲ್ಲು, ಮುಳ್ಳು, ಬೆಂಕಿ, ಬಿರುಗಾಳಿ, ಈ ಲೋಕದ ಯಾವಶಕ್ತಿಗಳೂ ಅವಳನ್ನು ತಡೆಯಲಾರವು.  ಲೋಕದೊಳಿದ್ದು, ಲೋಕಕೆ ಅತೀತವಾಗಿ ಆತ್ಮ ಸಂಗಾತಕ್ಕೆ ನೀನೆನಗುಂಟು ಎಂದು  ಮುನ್ನಡೆದಿರುವಳು ಅಕ್ಕ.  

ಅಕ್ಕಳಲ್ಲಿ ಈಗ ಲಿಂಗದ ಪರಿಭಾಷೆ ಇನ್ನೂ ವಿಸ್ತಾರ ವಾಗಿದೆ.   ಹೇಗೆ ನೋಡುವಾ…. ಬಯಲು ಲಿಂಗವೆಂಬೆನೆ ಬಗಿದು ನಡೆವಲ್ಲಿ ಹೋಯಿತ್ತು, ಬೆಟ್ಟಲಿಂಗವೆಂಬೆನೆ ಮೆಟ್ಟಿ ನಿಂದಲ್ಲಿ ಹೋಯಿತ್ತು, ತರುಮರಾದಿಗಳು ಲಿಂಗವೆಂಬೆನೆ ತರಿದಲ್ಲಿ ಹೋಯಿತ್ತು , ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದೆ ಚೆನ್ನಮಲ್ಲಿಕಾರ್ಜುನಾ ,ಸಂಗನ ಬಸವಣ್ಣವ ಮಾತು ಕೇಳದೆ ಕೆಟ್ಟೆನಯ್ಯಾ. 
ಎಂದು ಆಧ್ಯಾತ್ಮದ ಸಹಜವಾದ ಹುಡುಕಾಟವಾದ ಬೆಟ್ಟ,ಬಯಲು,ಗಿಡ,ಮರ,ಕಾಡು ಎಲ್ಲವುಗಳಲ್ಲಿ ಹುಡುಕಿದೆ ಅಲ್ಲೆಲ್ಲೂ ಇಲ್ಲದ ಲಿಂಗ ,ಜಂಗಮದ ಪಾದದಲ್ಲಿ ಕಂಡೆ ಎಂದು ಹೇಳುವ ಅಕ್ಕ , ಸಕಲ ಚರಾಚರದ ಒಳಿತಿನಲ್ಲಿ ಲಿಂಗವಿದೆ ಅದು ನಿರ್ದಿಗಂತವಾಗಿದೆ ಎಂಬ ಭಾವ ವಿಸ್ತರಣೆ ಆಗಿದೆ ಅಕ್ಕಳಲ್ಲಿ.  ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು, ಆ ಆಚಾರವೇ ಲಿಂಗವೆಂದರುಹಿದನಯ್ಯಾ ಬಸವಣ್ಣನು , ಎನ್ನ ಪ್ರಾಣದಲ್ಲಿ ಅರಿವು ತೋರಿದನಯ್ಯಾ ಬಸವಣ್ಣನು ಆ ಅರಿವೇ ಜಂಗಮವೆಂದರುಹಿದನಯ್ಯಾ ಬಸವಣ್ಣನು ಎಂದು  ಆಚಾರವೇ ಲಿಂಗ,ಅದರ ಅರಿವೇ ಜಂಗಮ ,ಆ ಜಂಗಮಲಿಂಗದ ಪಾದ ಹಿಡಿದು ಬದುಕಿದೆ ಎಂಬ ಅಕ್ಕಳ ಮಾತು ಪಕ್ವತೆಯಿಂದಥಳಥಳಿಸುತಿದೆ.  ಅಕ್ಕ ಸಂಪೂರ್ಣ ಲಿಂಗಮಯವಾಗಿ, ಭಾವತನ್ಮಯಳಾಗಿ, ಸೃಷ್ಟಿಯ ಸಕಲ ಚರಾಚರದಲ್ಲೂ ತನ್ನನ್ನು ತಾನು ತಾದ್ಯಾತ್ಮಗೊಳಿಸುತ್ತಾ ಚಿಲಿಮಿಲಿ ಎಂದೋದುವ ಗಿಳಿಗಳಿರಾ, ಸ್ವರವೆತ್ತಿ ಪಾಡುವ ಕೋಗಿಲೆಗಳಿರಾ, ಹಂಸೆಗಳೆ,ಆಳಿಸಂಕುಲವೆ ನೀವು ಕಂಡಿರಾ ನೀವು ಕಂಡಿರಾ ಎಂದು ಅವುಗಳ ಆನಂದದ ಕಾರಣ ಚೆನ್ನಮಲ್ಲಿಕಾರ್ಜುನನೇ ಇರಬೇಕೆಂದು ಲಿಂಗ ವಿಕಳಾವಸ್ಥೆಯಲಿ ತನ್ನನ್ನೇ ತಾ ಮರೆತು ಸಾಗುವಳು.  ಉಸಿರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ, ಶಮೆ,ದಮೆ,ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ , ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನ ಎಂದು ಲೋಕವೇ ತಾನಾಗಿ ಲಿಂಗವೇ ತಾನಾಗಿ ಲಿಂಗವೆನ್ನೆ, ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ,ಆಯಿತೆನ್ನೆ ಆಗದೆನ್ನೆ, ನೀ ಎನ್ನೆ, ನಾ ಎನ್ನೆ ಚೆನ್ನಮಲ್ಲಿಕಾರ್ಜುನ ಯ್ಯಾ  ಲಿಂಗೈಕ್ಯವಾದ ಬಳಿಕ ಏನೂ ಎನ್ನೆ ಎಂದು ತನ್ನನ್ನು ತಾನು ಲಿಂಗದಲ್ಲಿ ಐಕ್ಯಗೊಳಿಸಿ ಪರಮಾನಂದದ ಚರಮ ಸ್ಥಿತಿ ತಲುಪಿ ಬಯಲೊಳಗೆ ಬಯಲಾದಳು.  ಸೀಮೆಯಲಿದ್ದು ನಿಸ್ಸೀಮ ಳಾದಳು.


ಸುನಿತಾ ಮೂರಶಿಳ್ಳಿ

ಧಾರವಾಡ.

Author

12 Comments

 1. I precisely wanted to thank you so much all over again. I’m not certain what I would have gone through without the entire methods revealed by you regarding my field. It was actually a traumatic crisis for me, however , coming across the professional mode you processed it made me to weep for fulfillment. Extremely happier for the information and hope that you are aware of a powerful job that you are doing training many people thru your site. I am sure you’ve never met all of us.

 2. I enjoy you because of all your labor on this site. My daughter takes pleasure in getting into internet research and it is easy to understand why. Many of us know all concerning the powerful mode you offer very helpful tips through the web blog and as well increase participation from other people on the idea while our own princess is truly starting to learn a whole lot. Take pleasure in the rest of the new year. Your carrying out a tremendous job.

 3. I needed to put you one tiny word to be able to thank you again for those superb tips you’ve featured on this website. This has been simply extremely generous of people like you to convey freely what exactly many of us would have marketed for an electronic book in order to make some profit for their own end, most importantly now that you might have tried it if you desired. These creative ideas likewise served like a easy way to be sure that other people have a similar desire just as my personal own to know the truth much more around this matter. I know there are millions of more enjoyable sessions in the future for folks who start reading your site.

 4. Needed to post you one very little note so as to say thanks over again considering the superb suggestions you have shared in this case. It was simply incredibly generous of you to deliver publicly all numerous people could have offered for sale as an electronic book to help make some money for their own end, especially seeing that you could have done it if you decided. Those techniques also worked like a easy way to comprehend most people have a similar fervor like my personal own to know the truth more with regards to this condition. I believe there are several more pleasant situations in the future for many who discover your blog.

 5. I would like to show my admiration for your kindness supporting visitors who require help on in this niche. Your special commitment to getting the message across has been quite effective and have frequently made regular people like me to achieve their endeavors. Your amazing insightful help and advice entails much a person like me and a whole lot more to my office workers. Thanks a ton; from all of us.

 6. My husband and i have been now happy when Michael managed to do his reports while using the precious recommendations he discovered out of the blog. It is now and again perplexing to just possibly be freely giving things some others may have been selling. So we grasp we have the writer to be grateful to because of that. Those explanations you have made, the straightforward web site menu, the relationships your site give support to create – it is many terrific, and it’s really leading our son in addition to us recognize that the issue is fun, and that’s wonderfully fundamental. Thank you for the whole thing!

 7. I have to convey my passion for your kindness supporting folks who have the need for help with in this field. Your personal dedication to passing the solution around was definitely interesting and have consistently permitted guys just like me to get to their desired goals. Your entire interesting tips and hints entails this much to me and substantially more to my mates. Many thanks; from each one of us.

 8. Thank you so much for giving everyone remarkably marvellous opportunity to read articles and blog posts from this site. It’s always so sweet and as well , jam-packed with a good time for me personally and my office co-workers to visit your site nearly three times a week to find out the newest guidance you have. And lastly, I am just at all times pleased with the beautiful techniques you give. Certain two facts in this article are ultimately the finest I have had.

 9. I must show appreciation to this writer for bailing me out of such a incident. Because of researching through the search engines and meeting techniques which are not helpful, I assumed my entire life was done. Being alive without the answers to the difficulties you have resolved by means of your entire short post is a serious case, as well as ones that might have in a negative way affected my career if I had not discovered your web blog. Your own personal understanding and kindness in controlling all the details was important. I’m not sure what I would’ve done if I had not come upon such a solution like this. It’s possible to at this moment look forward to my future. Thanks for your time so much for the specialized and sensible guide. I will not hesitate to refer your web blog to any individual who should receive care about this subject matter.

 10. I wanted to jot down a small word in order to thank you for these pleasant items you are giving at this site. My time consuming internet research has at the end of the day been honored with wonderful facts and techniques to exchange with my co-workers. I would tell you that we website visitors are very much fortunate to live in a magnificent place with very many lovely individuals with good opinions. I feel truly happy to have used the webpages and look forward to tons of more brilliant times reading here. Thanks once more for all the details.

 11. Thanks for all your work on this website. My niece enjoys participating in internet research and it is easy to understand why. A lot of people know all about the compelling ways you deliver precious secrets by means of this web site and in addition foster contribution from others on the article then our own girl has always been becoming educated a great deal. Take advantage of the rest of the new year. You are always performing a great job.

Write A Comment